ರೋಹಿಣಿ ನಕ್ಷತ್ರವು ವೃಷಭ ರಾಶಿಯಲ್ಲಿಯ (ಟಾರಸ್) ಪ್ರಮುಖ ತಾರೆ (ಅಲ್ಡೆಬರಾನ್; ಟಾರಿ). ಇದೊಂದು ರಕ್ತದೈತ್ಯ (ಅಂದರೆ ಹೀಲಿಯಮ್ ನಕ್ಷತ್ರ). ಚಾಂದ್ರ ಕಕ್ಷೆಯ 27 ನಕ್ಷತ್ರಗಳ ಪೈಕಿ ಒಂದು. ಇದರ ವಿಷುವದಂಶ 4ಗಂ. 55ಮಿ. 55ಸೆ; ಫಂಟಾವೃತ್ತಾಂಶ 16027'58" ಉತ್ತರ. ಒಂದನೆಯ ಕಾಂತಿಮಾನದ ಕೆಂಪುಬಣ್ಣದ ನಕ್ಷತ್ರ. ವ್ಯಾಸ ಸೂರ್ಯ ವ್ಯಾಸದ ಸುಮಾರು 44 ಮಡಿ; ಉಜ್ಜ್ವಲತೆ ಸೂರ್ಯನದರ 90 ರಷ್ಟು. ಸೂರ್ಯನಿಂದ 68 ಜ್ಯೋತಿರ್ವರ್ಷ ದೂರದಲ್ಲಿದೆ. ಕ್ರಾಂತಿವೃತ್ತದ ಬಳಿಯೇ ಇರುವುದರಿಂದ ಸೂರ್ಯ ಮತ್ತು ಚಂದ್ರಗಳು ಈ ನಕ್ಷತ್ರಕ್ಕೆ ತೀರ ಸಮೀಪದಲ್ಲಿ ಹಾದುಹೋಗುತ್ತವೆ. ಇದು ಕೃಷ್ಣನ ಜನ್ಮನಕ್ಷತ್ರವಾಗಿದೆ. ಪುರಾಣಗಳ ಪ್ರಕಾರ ರೋಹಿಣಿಯು ಚಂದ್ರನ ಪತ್ನಿ. ಚಂದ್ರನ ಎಲ್ಲ ಪತ್ನಿಯರಲ್ಲಿ ರೋಹಿಣಿಯು ಚಂದ್ರನಿಗೆ ಅಚ್ಚುಮೆಚ್ಚಿನವಳು. ಇವಳು ಒಳ್ಳೆ ಉಡುಪುಗಳು, ಪ್ರಸಾಧನಗಳು ಮತ್ತು ಅಲಂಕಾರವನ್ನು ಇಷ್ಟಪಡುವವಳು ಎಂದು ಹೇಳಲಾಗುತ್ತದೆ. ಹಸುಗಳಿಂದ ಎಳೆಯಲ್ಪಡುವ ಬಂಡಿ ಈ ನಕ್ಷತ್ರದ ಸಂಕೇತವಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == " 2". . 25 2005. 14 2005. (, )